ಢ

ಕನ್ನಡ ವರ್ಣಮಾಲೆಯ ಟವರ್ಗದಲ್ಲಿಯ ನಾಲ್ಕನೆಯ ಮಹಾಪ್ರಾಣಾಕ್ಷರ. ಅಶೋಕನ ಕಾಲದಲ್ಲಿ ಆನೆ ಸೊಂಡಿಲಂತಿದ್ದ ಈ ಅಕ್ಷರಕ್ಕೆ ಕದಂಬರ ಕಾಲದಲ್ಲಿ ಹೊಕ್ಕಳೂ ಬಾದಾಮಿಯ ಚಾಳುಕ್ಯರ ಕಾಲಕ್ಕೆ ಸೂಕ್ಷ್ಮವಾಗಿ ತಲೆಕಟ್ಟೂ ಕಾಣಿಸಿಕೊಂಡವು. ಅಲ್ಪಪ್ರಾಣಾಕ್ಷರ ಡ ದಿಂದ ಇದನ್ನು ಬೇರ್ಪಡಿಸಲು ಇದರ ಹೊಕ್ಕಳು ಸೀಳಿದ್ದು ವಿಜಯನಗರದವರ ಕಾಲದಲ್ಲಿ. ಮೈಸೂರು ಅರಸರ ಕಾಲದ ರೂಪವೇ ಈಗ ಪ್ರಚಲಿತವಿದೆ. ಈ ಅಕ್ಷರ ಘೋಷ ಸ್ಪರ್ಶ ಮೂರ್ಧನ್ಯ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ.         (ಎ.ವಿ.ಎನ್.)